ಆದಾದಿಷ್ಟಮುಖದಿಂ ಸಾಧಿಸಿಕೊಂಡು ಬಂದ ಇಷ್ಟಲಿಂಗವನು
ಮಕುಟಸ್ಥಾನದಲ್ಲಿ ಧರಿಸಿ,
ನಿರಹಂಕಾರವೆಂಬ ಹಸ್ತಕ್ಕೆ ಸಾಧಿಸಿ ಬಂದ
ಸಕಲನಿಃಕಲತತ್ವ ಪದಾರ್ಥವನು,
ಇಚ್ಛಾಶಕ್ತಿಸಮೇತ ಸಾವಧಾನಭಕ್ತಿಯುಕ್ತವಾಗಿ
ಅಳಿದುಳಿದು ಅರ್ಪಿಸಿ ಭೋಗಿಸುತ್ತಿಹನು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಸಾದಿಶರಣ.
Art
Manuscript
Music
Courtesy:
Transliteration
Ādādiṣṭamukhadiṁ sādhisikoṇḍu banda iṣṭaliṅgavanu
makuṭasthānadalli dharisi,
nirahaṅkāravemba hastakke sādhisi banda
sakalaniḥkalatatva padārthavanu,
icchāśaktisamēta sāvadhānabhaktiyuktavāgi
aḷiduḷidu arpisi bhōgisuttihanu
guruniran̄jana cannabasavaliṅgā nim'ma prasādiśaraṇa.