Index   ವಚನ - 348    Search  
 
ಕಾಯದ ಕರ್ಮವ ಕಳೆದುಳಿದು ಕೊಟ್ಟು ಕೊಳಬಲ್ಲ ಪ್ರಸಾದಿ. ಮನದ ಕಲ್ಪನೆಯಳಿದುಳಿದು ಕೊಟ್ಟು ಕೊಳಬಲ್ಲ ಪ್ರಸಾದಿ. ಭಾವದ ಬಲೆಯ ಹರಿದು ಅರಿದು ಕೊಟ್ಟು ಕೊಳಬಲ್ಲ ಪ್ರಸಾದಿ. ಈ ತ್ರಿವಿಧವನು ತ್ರಿವಿಧಾವಸ್ಥೆಯೊಳಗೆ ಕೊಟ್ಟು ಕೊಳಬಲ್ಲ ಸಾವಧಾನಿ ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ.