Index   ವಚನ - 350    Search  
 
ಭುವನಾದಿ ಜನಿತವ ನಿರ್ಮಲ ಪದಾರ್ಥವ ಮಾಡಿ ಪರಮಾನಂದ ಪ್ರಸಾದಿ ಪರಿಪೂರ್ಣಲಿಂಗಕ್ಕೆ ಸಮರ್ಪಿಸಿಕೊಂಬುವನಲ್ಲದೆ, ಭುವನಾದಿ ಜನಿತ ಗುಣಸಂಭವಿತನಾಗಿ ಪ್ರಸಾದವ ಪಡೆದ ಪ್ರಸಾದಿಗಳೆಂದು ಪರಪದಾರ್ಥವನರ್ಪಿಸಿಕೊಂಬ ದುರ್ವಿವೇಕನಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ.