Index   ವಚನ - 369    Search  
 
ಕತ್ತಲೆಯ ಕೈಮರೆ ಜನಸೇವೆ ಸಂಬಂಧ ಅರುಹಿರಿಯರೆಲ್ಲ ಹಿಂದು ಮುಂದರಿಯದೆ ಸಂದಿನಡೆವರು ಸವೆಯದ ಬಟ್ಟೆಯ. ಇದನರಿದು ಬೆಂದ ಬೇಗೆಯನುರುಹಿ, ಬಂದ ಬರವನರಿದು ಸಂತತ ಸಕಲನುಮತವಾಗಿ ಬಾಗಿ ನಿಂದು ಭಾವಿಸಿ ಅರ್ಪಿಸಿಕೊಳಬಲ್ಲ ಅವಧಾನಿಗಲ್ಲದೆ ಅರ್ಪಿತವನರಿಯಬಾರದು ಗುರುನಿರಂಜನ ಚನ್ನಬಸವಲಿಂಗಾ.