Index   ವಚನ - 374    Search  
 
ಕಾಯವನರ್ಪಿಸಲರಿಯದೆ ಶುದ್ಧಪ್ರಸಾದಿಯೆಂದರೆ ಆಣವಮಲಸಂಬಂಧಿ ಸಂಚಿತಸುಖಿ. ಮನವನರ್ಪಿಸಲರಿಯದೆ ಸಿದ್ಧಪ್ರಸಾದಿಯೆಂದರೆ ಮಾಯಾಮಲಸಂಬಂಧಿ ಪ್ರಾರಬ್ಧ ಸುಖಿ. ಪ್ರಾಣವನರ್ಪಿಸಲರಿಯದೆ ಪ್ರಸಿದ್ಧ ಪ್ರಸಾದಿಯೆಂದರೆ ಕಾರ್ಮಿಕಮಲಸಂಬಂಧಿ ಆಗಾಮಿಸುಖಿ. ಮಲತ್ರಯಸಂಬಂಧವಾಗಿ ಕರ್ಮತ್ರಯನುಂಬ ಭ್ರಾಮಕರರಿವರೆ ತ್ರಿವಿಧ ಪ್ರಸಾದದಿರವ? ಅನಾದಿಸಂಸಿದ್ಧ ನಿರಂಜನ ಪ್ರಸಾದಿಯೇ ಬಲ್ಲನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.