Index   ವಚನ - 373    Search  
 
ಅರ್ಪಿಸಿಕೊಂಡಿಹೆನೆಂದು ಹುಸಿಯನೆ ತುಂಬುವರು; ಅರ್ಪಿಸಿದೆನೆಂಬುದು ಹುಸಿ. ಲಿಂಗವೆಲ್ಲಿಹದೊ? ಅಂಗವೆಲ್ಲಿಹದೊ? ಪದಾರ್ಥವೆಲ್ಲಿಹದೊ? ಲಿಂಗಾಂಗಪದಾರ್ಥವನರಿದರ್ಪಿಸಬಲ್ಲಾತಂಗಲ್ಲದೆ ಗುರುನಿರಂಜನ ಚನ್ನಬಸವಲಿಂಗಾ ನಿಜಪ್ರಸಾದವೆಲ್ಲರಿಗೆಲ್ಲಿಹದೊ?