ಹಲಾಯುಧನ ತನ್ನುಡಿಯೊಳಿರ್ದ ಯವನಾಳದಿ
ಸಕಲಬೀಜವನು ಚೆನ್ನಾಗಿ ಭೂಮಿಯೊಳು ಬಿತ್ತಲು
ಆ ಬಿತ್ತು ಅಂಕುರಿಸಿ ಪಲ್ಲವಿಸಿ ತಾ
ಸಹಿತ ಒಡೆಯಂಗೆಡೆಯಾಗುವುದು.
ಸದ್ಗುರುನಾಥನು ತನ್ನ ಚಿದ್ಫಾವದಲ್ಲಿರ್ದ ತ್ರಿವಿಧನುಗ್ರಹವನು
ನೆರೆ ಭೂಮ್ಯಾದಿ ತತ್ವಯುಕ್ತವಾದ
ಆತ್ಮನ ಹೃದಯದಲ್ಲಿ ಉಪದೇಶಿಸಲು,
ಅಂಕುರಿಸಿ, ಪಲ್ಲವಿಸಿ ಸರ್ವಾಚಾರಸಂಪತ್ತಿನಿಂದ
ಗುರುಚರಲಿಂಗಕ್ಕೆ ತಾಸಹಿತರ್ಪಿಸಿ
ಅನಂದಗೊಡಬಲ್ಲರೆ ಅದು ಸಾಹಸ.
ಅಂತಲ್ಲದೆ ಕಂಡವರ ಕಂಡುಕೊಂಡು
ನಡೆಗೆಟ್ಟು ನುಡಿಹೀನವಾಗಿ
ಮಡಿದು ಹೋಗುವ ನರಕಿಗಳು
ನಿರುತಪ್ರಸಾದಿಗಳಹರೆ
ಗುರುನಿರಂಜನ ಚನ್ನಬಸವಲಿಂಗಕ್ಕೆ.
Art
Manuscript
Music
Courtesy:
Transliteration
Halāyudhana tannuḍiyoḷirda yavanāḷadi
sakalabījavanu cennāgi bhūmiyoḷu bittalu
ā bittu aṅkurisi pallavisi tā
sahita oḍeyaṅgeḍeyāguvudu.
Sadgurunāthanu tanna cidphāvadallirda trividhanugrahavanu
nere bhūmyādi tatvayuktavāda
ātmana hr̥dayadalli upadēśisalu,
aṅkurisi, pallavisi sarvācārasampattininda
gurucaraliṅgakke tāsahitarpisi
anandagoḍaballare adu sāhasa.
Antallade kaṇḍavara kaṇḍukoṇḍu
naḍegeṭṭu nuḍ'̔ihīnavāgi
maḍidu hōguva narakigaḷu
nirutaprasādigaḷahare
guruniran̄jana cannabasavaliṅgakke.