Index   ವಚನ - 378    Search  
 
ತಾನು ಪ್ರಸಾದಿಯೆನಿಸಿಕೊಂಬ ಹಿರಿಯನು ತನ್ನ ಪ್ರಾಣವಾದ ಗುರುಚರಲಿಂಗಕ್ಕೆ ತನ್ನನರಿಯದೆ ಮಲತ್ರಯಕ್ಕೆ ಮಗ್ನತೆಯಾಗಿ ಹೊತ್ತುಗಳೆದರೆ ಕಿತ್ತು ಹಾಕುವರು ನಾಯಕನರಕದೊಳಗೆ ಅನಂತಕಾಲ ಗುರುನಿರಂಜನ ಚನ್ನಬಸವಲಿಂಗಾ.