Index   ವಚನ - 377    Search  
 
ಹಲಾಯುಧನ ತನ್ನುಡಿಯೊಳಿರ್ದ ಯವನಾಳದಿ ಸಕಲಬೀಜವನು ಚೆನ್ನಾಗಿ ಭೂಮಿಯೊಳು ಬಿತ್ತಲು ಆ ಬಿತ್ತು ಅಂಕುರಿಸಿ ಪಲ್ಲವಿಸಿ ತಾ ಸಹಿತ ಒಡೆಯಂಗೆಡೆಯಾಗುವುದು. ಸದ್ಗುರುನಾಥನು ತನ್ನ ಚಿದ್ಫಾವದಲ್ಲಿರ್ದ ತ್ರಿವಿಧನುಗ್ರಹವನು ನೆರೆ ಭೂಮ್ಯಾದಿ ತತ್ವಯುಕ್ತವಾದ ಆತ್ಮನ ಹೃದಯದಲ್ಲಿ ಉಪದೇಶಿಸಲು, ಅಂಕುರಿಸಿ, ಪಲ್ಲವಿಸಿ ಸರ್ವಾಚಾರಸಂಪತ್ತಿನಿಂದ ಗುರುಚರಲಿಂಗಕ್ಕೆ ತಾಸಹಿತರ್ಪಿಸಿ ಅನಂದಗೊಡಬಲ್ಲರೆ ಅದು ಸಾಹಸ. ಅಂತಲ್ಲದೆ ಕಂಡವರ ಕಂಡುಕೊಂಡು ನಡೆಗೆಟ್ಟು ನುಡಿಹೀನವಾಗಿ ಮಡಿದು ಹೋಗುವ ನರಕಿಗಳು ನಿರುತಪ್ರಸಾದಿಗಳಹರೆ ಗುರುನಿರಂಜನ ಚನ್ನಬಸವಲಿಂಗಕ್ಕೆ.