Index   ವಚನ - 380    Search  
 
ಕಾಯ ಮನ ಭಾವದಲ್ಲಿ ಸಂಬಂಧವಾದ ಮಾಯೋಚ್ಛಿಷ್ಟವ ತೊಳೆದುಕೊಂಡು ಬಂದಲ್ಲದೆ ಪ್ರಸಾದಿಯಲ್ಲ. ಅದೇನು ಕಾರಣವೆಂದಡೆ, ಕುಲಾಲನ ಸಂಪರ್ಕದಿಂದಾದ ಭಾಂಡಗಳನು ತೊಳೆದುಕೊಂಡಲ್ಲದೆ ಭೋಜನಬಳಕೆಗೆ ಸಲ್ಲ. ಸಲ್ಲಿದ ಬಳಿಕ ಪೂರ್ವಸೋಂಕವಾದರೆ ಹೊರಬಳಕೆಯನುಳಿದುಬಾರದು. ಪ್ರಸಾದಿಯೆನಿಸಿ ಪೂರ್ವಸೋಂಕವಾದರೆ ನರಕವನುಳಿದುಬಾರದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.