ಭಾವಮರೆದು ಭಕ್ತಿಯ ಮಾಡುವರು;
ಬರುಕಾಯರಿಗೆ ಸುಖವೆಲ್ಲಿಹದೋ!
ಭಾವಮರೆದು ಪೂಜೆಯ ಮಾಡುವರು;
ಹುಸಿಮನಯುಕ್ತರಿಗೆ ರತಿಪ್ರೇಮವೆಲ್ಲಿಹದೊ!
ಭಾವಮರೆದು ದಾಸೋಹವ ಮಾಡುವರು;
ಭ್ರಾಂತಂಗೆ ಪರಿಣಾಮವೆಲ್ಲಿಹದೊ!
ಭಾವಮರೆದು ಗುರುನಿರಂಜನ ಚನ್ನಬಸವಲಿಂಗಕ್ಕರ್ಪಿಸಿ
ಕೊಂಡೆವೆಂಬುವರು
ದ್ವೈತರು ಪ್ರಸಾದವೆಲ್ಲಿಹದೊ!
Art
Manuscript
Music
Courtesy:
Transliteration
Bhāvamaredu bhaktiya māḍuvaru;
barukāyarige sukhavellihadō!
Bhāvamaredu pūjeya māḍuvaru;
husimanayuktarige ratiprēmavellihado!
Bhāvamaredu dāsōhava māḍuvaru;
bhrāntaṅge pariṇāmavellihado!
Bhāvamaredu guruniran̄jana cannabasavaliṅgakkarpisi
koṇḍevembuvaru
dvaitaru prasādavellihado!