Index   ವಚನ - 433    Search  
 
ಶರಣಸತಿ ಲಿಂಗಪತಿಯೆಂಬ ಕುಶಲಗತಿಯುನ್ನತವನರಿಯದೆ ಅರ್ಚನೆಯಾರ್ಪಣಕ್ಕೆ ಭಿನ್ನರೆಂದು ನುಡಿವ ಅದ್ವೈತ ಗೊಡ್ಡು ವೇದಾಂತಿಗಳ ಕಸಮನವ ನೋಡಾ! ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವೇ ಅಂಗ ಮನ ಭಾವವಾಗಿರ್ದಡೆ ಅದ್ವೈತಿಗಳಿರವೆಂದು ನುಡಿವ ಅಪಶೈವ ಸಿದ್ಧಾಂತಿಗಳ ದುರ್ಭಾವದಂಗವ ನೋಡಾ! ಈ ಜೀವಕಾಯರಂತಂತಿರಲಿ, ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ ಶರಣ.