Index   ವಚನ - 466    Search  
 
ಪ್ರಾಣಲಿಂಗವಾದ ಬಳಿಕ ಪ್ರಾಣದಲ್ಲಿ ಗುಣವಿರಲುಂಟೆ? ಪ್ರಪಂಚ ತೋರಲುಂಟೆ? ಸಂಕಲ್ಪಭ್ರಮೆಯುಂಟೆ? ಅಜ್ಞಾನ ಸುಜ್ಞಾನ ಆವರಿಸಲುಂಟೆ? ಮಾಯಾಮೋಹ ಮಲದಲ್ಲಿ ಮಗ್ನತೆಯುಂಟೆ? ಇಂತು ಸಕಲ ಸಂಭವಿತನಾಗಿ ನಾನು ಪ್ರಾಣಲಿಂಗಸಂಬಂಧಿಯೆಂದರೆ ಕಾಲನ ಕರ್ಮ ಕಡೆಗಾಣದಿರ್ದನು, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾಗಿ.