ಲಕ್ಷವಂದನು ಲಕ್ಷಿಸಿ ಲಕ್ಷಿಸಲರಿಯದೆ
ಅಂತರ್ಲಕ್ಷ, ಮಧ್ಯರ್ಲಕ್ಷ, ಬಹಿರ್ಲಕ್ಷವೆಂದು
ತನುಕರಣೇಂದ್ರಿಯಾಯಾಸದಿಂದರಿವುದೇನು? ಆದದ್ದೇನು?
ಅವಿರಳಪ್ರಭಾನಂದ ಪ್ರಾಣಲಿಂಗವನರಿವಡೆ
ಆಯಾಸವಿಲ್ಲದೆ ಅರಿದಾನಂದಿಸಬೇಕು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Lakṣavandanu lakṣisi lakṣisalariyade
antarlakṣa, madhyarlakṣa, bahirlakṣavendu
tanukaraṇēndriyāyāsadindarivudēnu? Ādaddēnu?
Aviraḷaprabhānanda prāṇaliṅgavanarivaḍe
āyāsavillade aridānandisabēku kāṇā
guruniran̄jana cannabasavaliṅgā.