Index   ವಚನ - 473    Search  
 
ಪ್ರಾಣಲಿಂಗವ ಕಂಡವರೆಂದು ನುಡಿದುಕೊಂಬ ಕೋಣಮೂಳರನೇನೆಂಬೆನಯ್ಯಾ? ಕಂಡ ಲಿಂಗವ ಕೊಂಡ ಪರಿಯೆಂತು ಹೇಳಾ! ಕಂಡವರಾರು? ಕಾಣಿಸಿಕೊಂಡವರಾರು? ಬೆಂಡಾಗಿ ಬಿದ್ದು ಹೋದರು ನೋಡಾ ಗುರುನಿರಂಜನ ಚನ್ನಬಸವಲಿಂಗದಾದಿ ಮಧ್ಯಂತವನರಿಯದೆ.