ಪಂಚವಕ್ತ್ರದ ಮಿಂಚು ಮೈ ಸೋಂಕಿ
ಪಂಚವಕ್ತ್ರನ ಸಂಚವನರಿಯದೆ
ಕೆಂಚ ಕರಿಕರತ್ತಿತ್ತಾದರಲ್ಲಾ!
ಪಂಚ ಪಂಚವದಾಟಿ ಗೊಂಚಲ
ಫಳಿಕಿನಲ್ಲಿ ಹೊಳೆವ ಪರಶಿವಲಿಂಗವನು,
ಪರಿಪರಿಯಿಂದೆ ಕಂಡು
ಪರಮಸುಖಿಯಾಗಿರ್ದೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Pan̄cavaktrada min̄cu mai sōṅki
pan̄cavaktrana san̄cavanariyade
ken̄ca karikarattittādarallā!
Pan̄ca pan̄cavadāṭi gon̄cala
phaḷikinalli hoḷeva paraśivaliṅgavanu,
paripariyinde kaṇḍu
paramasukhiyāgirdenu kāṇā
guruniran̄jana cannabasavaliṅgā.