ಸ್ವಪ್ನದ ಸುಖದಣ್ಣಗಳು ಜಾಗ್ರದ ಸುಖವನರಿಯರು,
ಮೂರು ಬಣ್ಣದ ಮನೆಯೊಳಿಪ್ಪ ನಾರಿಯ ಸಂಗವ ತೊರೆದು
ಮೂರುಪರ್ವತವ ಹಿಡಿದಾಡುವ
ಕರಿಯ ಪರಿಯ ಮೋಹದಲ್ಲೆಸೆವರು ನೋಡಾ!
ಕಾಲಸಂದಿನ ಬಾಲೆಯೊಳು ಸಿಲ್ಕಿ
ಮೇಲು ಕಾಸಾರ ಪದ್ಮಪ್ರಭೆಯೊಳಿರ್ದೆನೆಂಬ
ಶಬ್ದಜಾಲಿಗಳನೊದ್ದು ಕೆಡಹುವರು ಕಾಲನವರು,
ಗುರುನಿರಂಜನ ಚನ್ನಬಸವಲಿಂಗದತ್ತ ಬರಗೊಡದೆ.
Art
Manuscript
Music
Courtesy:
Transliteration
Svapnada sukhadaṇṇagaḷu jāgrada sukhavanariyaru,
mūru baṇṇada maneyoḷippa nāriya saṅgava toredu
mūruparvatava hiḍidāḍuva
kariya pariya mōhadallesevaru nōḍā!
Kālasandina bāleyoḷu silki
mēlu kāsāra padmaprabheyoḷirdenemba
śabdajāligaḷanoddu keḍahuvaru kālanavaru,
guruniran̄jana cannabasavaliṅgadatta baragoḍade.