Index   ವಚನ - 545    Search  
 
ಅತ್ತಿತ್ತಲುಕದೆ ನಿಟ್ಟೆಲುವ ನೇವರಿಸಿ ಮೂರೇಳು ಗ್ರಂಥಿಯ ತಟ್ಟಿಸಿ ಕುಂಡಲಿಯ ನೆಗೆದು ಬಂಧಿಸಿದಂದಕ್ಕಿಳಿದು ವಾತ ಪಿತ್ತ ಶ್ಲೇಷ್ಮಯೇರಿಸಿದ ರಸನೆಗಿಳಿಯೆ ಚಿದಾಮೃತವೆಂದು ಸೇವಿಸಿ ಬಾಳಿಹೋಗುವ ಬಯಲಭ್ರಾಂತರಿಗಿನ್ನೆಂತು ಪ್ರಾಣಲಿಂಗದ ಪ್ರಸಾದ ಸಾಧ್ಯವಪ್ಪುದು ಹೇಳಾ ಗುರುನಿರಂಜನ ಚನ್ನಬಸವಲಿಂಗಾ?