Index   ವಚನ - 544    Search  
 
ಕಾಣಿಸುವ ಕಮಲದೊಳಗಿರ್ಪ ಜಾಣನ ಕಂಡು ಕಾಣಬಂದ ಧರೆಗಗನದೊಳಗುಳ್ಳ ಸಿರಿಸಂಪದನಿತ್ತುಕೊಂಬ ನಿಯತವನರಿಯದೆ ಕಷ್ಟದಿಂದೆಬ್ಬಿಸಿ ಕಾರಣವೆಂದು ಸೇವಿಸಿ ಕಾಲಬೆಳೆಯ ಕಳೆಯನುಂಬ ಕಲ್ಪಿತರೇನು ಬಲ್ಲರಯ್ಯಾ ನಿಮ್ಮ ಪ್ರಾಣಲಿಂಗದ ನಿಲವ ಗುರುನಿರಂಜನ ಚನ್ನಬಸವಲಿಂಗಾ?