Index   ವಚನ - 549    Search  
 
ಗಂಡನ ಚಿತ್ತವನರಿದು ಒತ್ತೆಯನಿತ್ತ ಒಲುಮೆ ಗೆಲುವಾಗಿತ್ತು ನೋಡಾ! ಲಿಂಗದ ಬೆಳಗನರಿದ ಕಳೆಯನೊತ್ತೆಯು ಕಲ್ಪವೃಕ್ಷ ಕಾಣಾ! ಅರಿಯದ ಗುದ್ಯಾಟ ಬರಿಗೈಯ ಸುರಿದಂತೆ ಪರಿಣಾಮದ ಪ್ರಭೆಯಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ!