Index   ವಚನ - 551    Search  
 
ಕಂಡಮಂಡಲದಲ್ಲಿ ಕಂಡವರೆಂದು ಕಾಲಿಗೆ ಬಂದಂತೆ ನಡೆವರಯ್ಯಾ ; ಬಾಯಿಗೆ ಬಂದಂತೆ ನುಡಿವರಯ್ಯಾ ; ಮನಕ್ಕೆ ಬಂದಂತೆ ಮಾಟಕೂಟದೊಳಿರ್ದು, ಶರಣಪದ ಬೆಳಗ ಸುಖಮಯರೆಂದರೆ ನಗುವರಯ್ಯಾ ನಿಮ್ಮ ಶರಣರು, ಗುರುನಿರಂಜನ ಚನ್ನಬಸವಲಿಂಗಾ.