Index   ವಚನ - 563    Search  
 
ನಿರ್ಮನವೆಂಬ ಭೂಮಿಯಮೇಲೆ ಚಿದ್ವೃಷ್ಟಿಗರೆಯಲು, ಹದನರಿದು ಹಲಾಯುಧ ಮೂರುತಾಳಕೂರಿಗೆಯಿಂದ ಬಿತ್ತಿದಲ್ಲಿ ಒಂದಂಕುರದಿಂದಂಕುರಿಸಿದ ಪೈರದಿ ಸಕಲ ಚರಾಚರಕ್ಕೆ ಸೌಖ್ಯದೋರಿ, ಉರಹಿತಂಗೆ ಉಲ್ಲಾಸವಾಗಿ, ತೆರಿಗೆಯ ಹೊನ್ನ ಒಂದೆರಡು ಹಪ್ತಿಯ ಮಾಡಿಕೊಟ್ಟು, ಹಿರಿಯರ ಗತಿಹಿಂಗದೆ ಮಂಗಳಮಂಟಪದಲ್ಲಿರ್ಪ ಮಹಾರಾಜನ ಪ್ರಭೆಯಲ್ಲಡಗಿ, ಮನೆ ಹೊಲ ಸುಖ ಮರೆದು ಮರುಳುಗೊಂಡರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗೈಕ್ಯ ತಾನೆ.