ಒಂದೆರಡು ಬಾಗಿಲದಾಟಿ ಉತ್ತರದಕ್ಷಿಣ ಗೊತ್ತಿನ
ಗೊರವರ ಮನೆಯ ಮುಂದೆರಡು
ನಂದಾದೀವಿಗೆಯ ಮಂಟಪದೊಳಗೆ
ಸೂರ್ಯೇಂದು ವಹ್ನಿಕೋಟಿಪ್ರಭಾಮಯನಾಗಿತೋರುವ
ಪರಮಪ್ರಾಣಲಿಂಗವನು
ತೆರಹಿಲ್ಲದೆ ಕಂಡು ಕೂಡಿ ಸುಖಿಸಬಲ್ಲ
ಸುಜ್ಞಾನಿ ಶರಣನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Onderaḍu bāgiladāṭi uttaradakṣiṇa gottina
goravara maneya munderaḍu
nandādīvigeya maṇṭapadoḷage
sūryēndu vahnikōṭiprabhāmayanāgitōruva
paramaprāṇaliṅgavanu
terahillade kaṇḍu kūḍi sukhisaballa
sujñāni śaraṇana pādakke
namō namō embenayyā guruniran̄jana
cannabasavaliṅgā.
ಸ್ಥಲ -
ಪ್ರಾಣಲಿಂಗಿಯ ಶರಣಸ್ಥಲ