ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
ಭೇದವನಾರು ಅರಿಯಬಾರದು ನೋಡಾ,
ಅದೆಂತೆಂದೊಡೆ,
ಸುಜ್ಞಾನ ಪರಿಪೂರ್ಣಭರಿತವೆಂಬುದೇ ಪ್ರಾಣಲಿಂಗತ್ವ.
ಸತ್ಕ್ರಿಯಾಸನ್ನಿಹಿತ ಸತ್ಪ್ರೇಮಮುಖವೆಂಬುದೇ ಲಿಂಗಪ್ರಾಣತ್ವ.
ಉರಿಕರ್ಪೂರಸಂಯೋಗಲಯದಂತೆ
ಸಮರಸಾನುಭಾವೈಕ್ಯವಾದುದೇ ಪ್ರಸಾದಮುಕ್ತತ್ವ.
ಇಂತು ಇದರಂದವನರಿದ ಅಪ್ರತಿಮ ಪ್ರಕಾಶಮಯ ತಾನೆ
ಪ್ರಾಣಲಿಂಗೈಕ್ಯ ಕಾಣಾ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Prāṇaliṅgatva liṅgaprāṇatva prasādamuktatvavemba
bhēdavanāru ariyabāradu nōḍā,
adentendoḍe,
sujñāna paripūrṇabharitavembudē prāṇaliṅgatva.
Satkriyāsannihita satprēmamukhavembudē liṅgaprāṇatva.
Urikarpūrasanyōgalayadante
samarasānubhāvaikyavādudē prasādamuktatva.
Intu idarandavanarida apratima prakāśamaya tāne
prāṇaliṅgaikya kāṇā guruniran̄jana
cannabasavaliṅgā.
ಸ್ಥಲ -
ಪ್ರಾಣಲಿಂಗಿಯ ಐಕ್ಯಸ್ಥಲ