ಚಲುವ ಲಿಂಗಯ್ಯ ಒಲಿದು ಬಂದನೆಂದು
ನಲುವಿಂದೆ ಮನೆಯ ನಿರ್ಮಿಸಿದಳು.
ಗೋಡೆಯ ತೊಳೆದು ಸಾರೆಣೆಯ ಮಾಡಿ ಚಿತ್ರವಗೊಳಿಸಿದಳು.
ಹಳೆಯ ತೊಲೆಪಟ್ಟಿ ಜಂತೆಗಳ ತೊಳೆದು
ಬಿಳಿಯ ಬಣ್ಣದಿಂದ ಒಪ್ಪವಿಟ್ಟಳು.
ನೆಲಗಚ್ಚನೆಬ್ಬಿಸಿ ಸುಟ್ಟು ನಿರ್ಮಲರಿವೆಯ
ನಡೆಮಡಿಯ ಮಾಡಿದಳು.
ಮೇಲಣ ಪಟ್ಟಸಾಲೆಯ ಮೊದಲು
ನಿರ್ಮಿಸಿದ ಚದುರಗೆಲಸದ ಪೀಠವನರಿದು ಕೆಳದಿಯರೊಂದಾಗಿ
ಕೈಗೊಟ್ಟು ನೆರೆದರೆ ಪರಿಣಾಮವಾಯಿತ್ತು
ಗುರುನಿರಂಜನ ಚೆನ್ನಬಸವಲಿಂಗಕ್ಕೆ.