ಅಪ್ರತಿಮ ಶಿವಯೋಗಿಯ ವೇಷವ ಧರಿಸಿ
ಅನುಪಮಸುಖಮುಖಾನಂದವನರಿಯದೆ,
ಹಗಲೇ ಕತ್ತಲೆಯಣ್ಣಗಳ ಮಾತಿಗರುವಿತ್ತು
ಅತ್ತಿತ್ತನರಿಯದೆ ಸುತ್ತಿ ಸುತ್ತಿ ಸುಳಿವರು
ಅಶುದ್ಧಬದ್ಧ ಹುಸಿಕರು ಗುರುನಿರಂಜನ
ಚನ್ನಬಸವಲಿಂಗವನರಿಯದೆ.
Art
Manuscript
Music
Courtesy:
Transliteration
Apratima śivayōgiya vēṣava dharisi
anupamasukhamukhānandavanariyade,
hagalē kattaleyaṇṇagaḷa mātigaruvittu
attittanariyade sutti sutti suḷivaru
aśud'dhabad'dha husikaru guruniran̄jana
cannabasavaliṅgavanariyade.