ಅನಾದಿ ಪರಶಿವಲಿಂಗವನು
ತಮ್ಮ ವಶಗತವ ಮಾಡಿಕೊಂಡಾಚರಿಸುವ ಅಪ್ರತಿಮ ಶರಣರಿಗೆ
ಬಿನುಗು ಮಾತಿನಲ್ಲಿ ಜಿನುಗುತಲೊಂದೊಂದು
ಘನವ ಕಿರಿದಿಟ್ಟು, ಕಿರಿದ ಘನವಮಾಡಿ,
ಹುಸಿಹುಂಡನ ಮಾಟವನು ಢಂಬಿಗಿಕ್ಕುವ
ಭಂಡ ಮೂಕೊರೆಯರು ದಂಡಧರನಾಳಿನ
ಕೈಯಲ್ಲಿ ಕೊಲ್ಲಿಸಿಕೊಳ್ಳರೆ?
ಮುಂದೆ ಗುರುನಿರಂಜನ
ಚನ್ನಬಸವಲಿಂಗವ ಮುಟ್ಟದೆ ಕೆಟ್ಟರು.
Art
Manuscript
Music
Courtesy:
Transliteration
Anādi paraśivaliṅgavanu
tam'ma vaśagatava māḍikoṇḍācarisuva apratima śaraṇarige
binugu mātinalli jinugutalondondu
ghanava kiridiṭṭu, kirida ghanavamāḍi,
husihuṇḍana māṭavanu ḍhambigikkuva
bhaṇḍa mūkoreyaru daṇḍadharanāḷina
kaiyalli kollisikoḷḷare?
Munde guruniran̄jana
cannabasavaliṅgava muṭṭade keṭṭaru.