Index   ವಚನ - 677    Search  
 
ಕಾಯದಲ್ಲೊಬ್ಬನ ಮೆಚ್ಟಿ ಮಾಡಿದವಳು, ಆವಗೆ ರತಿಗೊಟ್ಟವಳು, ಆವಗೆ ಉಣಿಸಿದವಳು, ಆತನ ಮೋಹಿಸಿದವಳು, ಇವರಂತಿರಲಿ, ಎನ್ನ ಸುಖವನರಿಯರು. ಮನದಲ್ಲೊಬ್ಬನ ಮೆಚ್ಚಿ ಮಾಡಿದವಳು, ಅಲ್ಲಿಯೇ ನಿಷ್ಠೆಯನಿಟ್ಟವಳು, ಅಲ್ಲಿಯೇ ಮನಮೆಚ್ಚಿ ಉಣಿಸಿದವಳು, ಅಲ್ಲಿಯೇ ಮಾತಿನ ಮಲಕಿನೊಳು ಮರುಳಾದವಳು, ಇವರಂತಿರಲಿ, ಎನ್ನ ಪರಿಣಾಮವನರಿಯರು. ಭಾವದಲ್ಲೊಬ್ಬನ ಮೆಚ್ಚಿ ಮಾಡಿದವಳು, ಆವಗೆ ಮನವಿಟ್ಟವಳು, ಅಲ್ಲಿಯೇ ಗೋಪ್ಯದಲ್ಲಿ ಉಣಿಸಿದವಳು, ಅಲ್ಲಿಯೇ ಭಾವಭ್ರಾಂತಿಗೊಂಡವಳು, ಇವರಂತಿರಲಿ, ಎನ್ನ ಸಂಯೋಗವನರಿಯರು. ಗುರುನಿರಂಜನ ಚನ್ನಬಸವಲಿಂಗದ ಸುಖವ ಅಂಗನೆಗಲ್ಲದೆ ಮತ್ತಾರು ಅರಿಯರು ಕಾಣಾ.