Index   ವಚನ - 702    Search  
 
ಬಲ್ಲಿದರೆಂಬ ಹರಿ ವಿಧಿಗಲ್ಲಲ್ಲಿಗರಿಸದ ಅಖಂಡ ಚಿನ್ಮಯಲಿಂಗವನು ಸಲ್ಲಲಿತವಾಗಿ ಪಡೆದ ಸತ್ಯಶರಣನ ಮುಂದೆ ಆಗುಹೋಗಿನ ಛಾಯೆ ಅನಂತವಾಗಿ ತೋರಿದಡೇನು ಅಭ್ರದಂಗದ ಪರಿಯೆಂದರಿದು ಚರಿಸುವನಲ್ಲದೆ, ಏನುಯೆಂತೆಂಬ ಭಾವ ಅವಸ್ಥಾತ್ರಯದಲ್ಲಿ ಅರಿಯನು ಕಾಣಾ. ಪರಿಪೂರ್ಣನೇ ತಾನಾಗಿ ಸತ್ತುಚಿತ್ತಾನಂದ ನಿತ್ಯಸನ್ನಿಹಿತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಗಮನಾಗಮನಗಮ್ಯ ಕಾಣಾ.