Index   ವಚನ - 719    Search  
 
ತಾನೇ ಶಿವನೆಂದು ಅರಿದು ಸತ್ತ ಬಳಿಕ ನಿತ್ಯಾನಂದ ನಿಜಸುಖಿಯೆಂದಿತ್ತು. ತಾನೇ ದೇಹಿಯೆಂದು ಮರೆದು ಸತ್ತ ಬಳಿಕ ಮಿಥ್ಯಾನಂದ ಭವದುಃಖಿಯೆಂದಿತ್ತು. ತನ್ನ ತಾನರಿಯದೆ ತಾನೆಯೆಂದು ತನು ಭಾವ-ಮನ-ಪ್ರಾಣಧರ್ಮದಲ್ಲಿರ್ದು ಸತ್ತ ಬಳಿಕ ತ್ರಿದೈವ ಕುಳವೆಂದಿತ್ತು. ತನುಭಾವನಾಗಿ ಮಹಾನುಭಾವ ಶಿವನ ಘನವಾಗಿ ಪೂಜಿಸಿ ತನುವಳಿದ ಬಳಿಕ ದೇವಾದಿ ಮನುಜಾಂತ್ಯ ಪದದೊಳೊಂದುಂಟು ಮೂಲಕ್ಕೆಂದಿತ್ತು ಗುರುನಿರಂಜನ ಚನ್ನಬಸವಲಿಂಗದಲ್ಲಿ ಶಿವಶರಣರ ವಾಕ್ಯ.