Index   ವಚನ - 728    Search  
 
ಅಯ್ಯಾ, ಕೈಯೊಡ್ಡಿ ಬೇಡುವದು ಸ್ಥಲವಲ್ಲ ; ಕೈಯೆತ್ತಿಕ್ಕುವದು ಸ್ಥಲವಲ್ಲ. ಮತ್ತೆಂತೆಂದೊಡೆ, ಗೋದಿ ತೊಗರಿ ಬರಗು ಅಗಸೆ ಚೆನ್ನಂಗಿಬೇಳೆ ಕಡ್ಲೆ ಬೇಳೆ ಬೆಲ್ಲ ಹುಣಸಿಹಣ್ಣು ಮಧು-ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಗುರುವನರಿದಿತ್ತುಕೊಂಬುದೇ ಶುದ್ಧಪ್ರಸಾದ. ಅಕ್ಕಿ ಕುಸುಬೆ ಬಿಳಿಯೆಳ್ಳು ಬೀಳಿಜೋಳ ಸಾಸಿವೆ ಹಾಲು ಮೊಸರು ಲವಣ ಹೆತ್ತುಪ್ಪ ಶುಂಠಿ ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಲಿಂಗವನರಿದಿತ್ತುಕೊಂಬುದೇ ಸಿದ್ಧಪ್ರಸಾದ. ಉದ್ದು ಸಾವೆ ಬಟಾಣೆ ಸಜ್ಜೆ ಕರಿಕಡ್ಲೆ ತೈಲ ಮೆಣಸು ಲವಂಗ ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಜಂಗಮವನರಿದಿತ್ತುಕೊಂಬುದೇ ಪ್ರಸಿದ್ಧಪ್ರಸಾದ. ಈ ಸೈದಾನದೊಳಗಿಪ್ಪ ಸಕಲವನರಿದು ನಿರ್ಮಲ ಪಾಕವಮಾಡಿ ನಿಜಗುರುನಿರಂಜನ ಚನ್ನಬಸವಲಿಂಗವನರಿದಿತ್ತುಕೊಂಬ ಮಹಾಪ್ರಸಾದಿಯೇ ಶರಣ ಕಾಣಾ.