Index   ವಚನ - 740    Search  
 
ಅಕ್ಕತಂಗಿಯರ ಚಕ್ಕಂದ ಹೊಕ್ಕಿತೆನ್ನ ಒಡಲೊಳಗೆ. ಸಕ್ಕರೆ ಹಾಲು ಸಮರಸವನಿಟ್ಟು ಕಂಡವರಳವೆ ಧರೆಯೊಳಗೆ? ಚೆದುರ ಹದುರಿನ ಸೊಬಗು ಸದನವುಳ್ಳನ್ನಕ್ಕರ ಸವೆಯದು. ಮುದದಿನೋಡುವೆ ಮಹಾಘನದೊಳು ನಿಂದು ಸವಿಸವಿಯ ಗುರುನಿರಂಜನ ಚನ್ನಬಸವಲಿಂಗವನರಿಯದೆ.