Index   ವಚನ - 755    Search  
 
ಕಾಲಿಲ್ಲವೆಂಬುದು ಕಾಣಬಂದಿತ್ತು, ಕಣ್ಣಿಲ್ಲವೆಂಬುದು ಕಾಣಬಂದಿತ್ತು, ಕಿವಿಯಿಲ್ಲವೆಂಬುದು ಕಾಣಬಂದಿತ್ತು, ಜಿಹ್ವೆಯಿಲ್ಲವೆಂಬುದು ಕಾಣಬಂದಿತ್ತು, ನಾಸಿಕವಿಲ್ಲವೆಂಬುದು ಕಾಣಬಂದಿತ್ತು, ಸರ್ವಾಂಗವಿಲ್ಲವೆಂಬುದು ಕಾಣಬಂದಿತ್ತು, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣರನುಭಾವದಿಂದೆ ಶರಣಂಗೆ.