Index   ವಚನ - 756    Search  
 
ಶ್ರೀಮಹಾಕಲ್ಯಾಣದೊಳಗಿರ್ದು ನಿತ್ಯಾನುಭವದ ಬೆಳಗಿನೊಳೋಲ್ಯಾಡುತಿರ್ದೆನು. ಅದು ಹೇಗೆಂದೊಡೆ, ಆದ್ಯರನುಭಾವವೆನ್ನ ಕಾರಣತನುವಿನಲ್ಲಿ ಆನಂದಪ್ರಕಾಶಮಯವಾಗಿ ಕಾಣಿಸುತ್ತಿಹುದು. ವೇದ್ಯರನುಭಾವವೆನ್ನ ಸೂಕ್ಷ್ಮತನುವಿನಲ್ಲಿ ಚಿತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಸಾಧ್ಯರನುಭಾವವೆನ್ನ ಸ್ಥೂಲತನುವಿನಲ್ಲಿ ಸತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಇದು ಕಾರಣ, ಈ ತ್ರಿವಿಧ ಮಹಿಮರನುಭಾವಕ್ಕೆ ಎನ್ನನೊತ್ತೆಯನಿತ್ತು ಮರೆದಿರ್ದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.