ಶ್ರೀಮಹಾಕಲ್ಯಾಣದೊಳಗಿರ್ದು
ನಿತ್ಯಾನುಭವದ ಬೆಳಗಿನೊಳೋಲ್ಯಾಡುತಿರ್ದೆನು.
ಅದು ಹೇಗೆಂದೊಡೆ, ಆದ್ಯರನುಭಾವವೆನ್ನ ಕಾರಣತನುವಿನಲ್ಲಿ
ಆನಂದಪ್ರಕಾಶಮಯವಾಗಿ ಕಾಣಿಸುತ್ತಿಹುದು.
ವೇದ್ಯರನುಭಾವವೆನ್ನ ಸೂಕ್ಷ್ಮತನುವಿನಲ್ಲಿ
ಚಿತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು.
ಸಾಧ್ಯರನುಭಾವವೆನ್ನ ಸ್ಥೂಲತನುವಿನಲ್ಲಿ
ಸತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು.
ಇದು ಕಾರಣ, ಈ ತ್ರಿವಿಧ ಮಹಿಮರನುಭಾವಕ್ಕೆ
ಎನ್ನನೊತ್ತೆಯನಿತ್ತು
ಮರೆದಿರ್ದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Śrīmahākalyāṇadoḷagirdu
nityānubhavada beḷaginoḷōlyāḍutirdenu.
Adu hēgendoḍe, ādyaranubhāvavenna kāraṇatanuvinalli
ānandaprakāśamayavāgi kāṇisuttihudu.
Vēdyaranubhāvavenna sūkṣmatanuvinalli
citprakāśamayavāgi kāṇisuttihudu.
Sādhyaranubhāvavenna sthūlatanuvinalli
satprakāśamayavāgi kāṇisuttihudu.
Idu kāraṇa, ī trividha mahimaranubhāvakke
ennanotteyanittu
maredirde guruniran̄jana cannabasavaliṅgadalli.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ