ಕಾಲಿಲ್ಲವೆಂಬುದು ಕಾಣಬಂದಿತ್ತು,
ಕಣ್ಣಿಲ್ಲವೆಂಬುದು ಕಾಣಬಂದಿತ್ತು,
ಕಿವಿಯಿಲ್ಲವೆಂಬುದು ಕಾಣಬಂದಿತ್ತು,
ಜಿಹ್ವೆಯಿಲ್ಲವೆಂಬುದು ಕಾಣಬಂದಿತ್ತು,
ನಾಸಿಕವಿಲ್ಲವೆಂಬುದು ಕಾಣಬಂದಿತ್ತು,
ಸರ್ವಾಂಗವಿಲ್ಲವೆಂಬುದು ಕಾಣಬಂದಿತ್ತು,
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣರನುಭಾವದಿಂದೆ ಶರಣಂಗೆ.
Art
Manuscript
Music
Courtesy:
Transliteration
Kālillavembudu kāṇabandittu,
kaṇṇillavembudu kāṇabandittu,
kiviyillavembudu kāṇabandittu,
jihveyillavembudu kāṇabandittu,
nāsikavillavembudu kāṇabandittu,
sarvāṅgavillavembudu kāṇabandittu,
guruniran̄jana cannabasavaliṅgā,
nim'ma śaraṇaranubhāvadinde śaraṇaṅge.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ