Index   ವಚನ - 757    Search  
 
ಅಯ್ಯಾ, ಎನ್ನ ಚೌಪೀಠಮಂಟಪದಲ್ಲಿ ಪ್ರಭುದೇವರನುಭಾವವ ನೋಡಿ ಪರಮಪರವಶವಾಗಿರ್ದೆನು. ಅಯ್ಯಾ, ಎನ್ನ ಮಧ್ಯಪೀಠದಮಂಟಪದಲ್ಲಿ ಚನ್ನಬಸವಣ್ಣನನುಭಾವವ ನೋಡಿ ನಿರುತಪರವಶವಾಗಿರ್ದೆನು. ಅಯ್ಯಾ, ಎನ್ನ ಕಂಗಳಮುಂದಣ ಮಂಗಳಮಂಟಪದಲ್ಲಿ ಬಸವಣ್ಣನನುಭಾವವ ನೋಡಿ ಅವಿರಳಪರವಶವಾಗಿರ್ದೆನು. ಇಂತು ಸಕಲ ಪುರಾತನರನುಭಾವಪ್ರಕಾಶದೊಳು ಮುಳುಗಿ ಘನಪರವಶದಿಂದೋಲ್ಯಾಡುತಿರ್ದೆನು ಗುರುನಿರಂಜನ ಚನ್ನಬಸವಲಿಂಗ ನಿಮ್ಮೊಳಗೆ.