Index   ವಚನ - 765    Search  
 
ಬೆಳಗಿಲ್ಲದ ಬೆಳಗಿನ ಮನೆಯಲ್ಲಿ ಇಳೆಯಾಂಬರ ನಿಸ್ಸಾರದೇವ ಬಳಿವಿಡಿಯೆ ಕರ್ಮಕ್ಕನುಗೆಯ್ದ ಸುಖರತಿಯ ಬೆಳಗ ಹೇಳಲಾರಳವಲ್ಲ ಕೇಳಲಾರಳವಲ್ಲ ನೋಡಲಾರಳವಲ್ಲ ಕೂಡಲಾರಳವಲ್ಲ ಗುರುನಿರಂಜನ ಚನ್ನಬಸವಲಿಂಗವ ಭಿನ್ನವಿಟ್ಟು.