Index   ವಚನ - 782    Search  
 
ಮಂಗಳದೆಸೆವಿಡಿದು ಸಂಗಸಮೇತ ಚರಿಸುವ ಜಂಗಮಲಿಂಗದೇವನು ತಾನು, ಲಿಂಗಶರಣರನರಸುತ್ತ ಸದ್ಭಕ್ತಿಯ ಕೊಳ್ಳುತ್ತ ನಿಜಾನುಭಾವವನುಸುರುತ್ತ ಅಭಿನ್ನತ್ವವ ತೋರುತ್ತ ತಾನುತಾನಾಗಿ ಚರಿಸುವನಲ್ಲದೆ ಕಾಯಪ್ರಕೃತಿವಿಡಿದು ಕಾಮಿನಿ ಕನಕಾಲಯದೊಳ್ಬಿದ್ದು ವೇಷಧಾರಿಯಾಗಿ ಮಲರುಚಿಯನರಸುತ್ತ ಕಾರ್ಪಣ್ಯಬಟ್ಟು ಕರಕರೆಯಕೊಳ್ಳುತ್ತ ಜನರಿಗೆ ಹೇಯವ ತೋರುತ್ತ ಉದರಾಗ್ನಿಯೊಳ್ಮುಳುಗಿ ಹೋಗುವ ಬಿನುಗುಮಾನವರಂತಲ್ಲ ನೋಡಾ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ.