ಇಲಿ ಬೆಕ್ಕ ನುಂಗಿ ಕರಿಯಿರುವೆಯೊಳಡಗಿ
ನೀರಸಕ್ಕರೆಯ ಸವಿವುದ ಕಂಡೆ.
ಕಲ್ಲುಹೋರಿನಲ್ಲಿ ನಿಶಾಕರನುದಯವಾಗಿ
ಬೆಳುದಿಂಗಳದೊಳಗೆ ದಿವಾಕರನುದಯವಾದುದ ಕಂಡೆ.
ಬಿಸಿಲು ಆವರಿಸಿದಲ್ಲಿ ಇಲಿ ಸತ್ತು, ಮಾರ್ಜಾಲವೆದ್ದು,
ಕರಿಯಿರುವೆಯ ಕೊಡಹಿ,
ನೀರಸಕ್ಕರೆಯ ಚರಣದಲ್ಲೊದೆದು
ಕಲ್ಲುಹೋರು ಕರಗಿ ಕಸವಳಿದಲ್ಲಿ
ಬಯಲಬೊಂಬೆಯ ಸಂಗವಮಾಡಿ
ನಿರ್ವಯಲರೂಪು ಸುತನ ಹಡೆದುದ ನೋಡಿ
ರತಿತ್ರಯವೇದಿ ಕುಚಗಳನೊತ್ತಿ ನೆರೆಯಲಾಗಿ
ಸತಿಪತಿ ತೋರಲೊಲ್ಲದೆ ಸ್ತ್ರೀಯಳಿದು ಪುರುಷನಾಗಿ ಸತ್ತಲ್ಲಿ
ಗುರುನಿರಂಜನ ಚನ್ನಬಸವಲಿಂಗ ತಾನೆ.
Art
Manuscript
Music
Courtesy:
Transliteration
Ili bekka nuṅgi kariyiruveyoḷaḍagi
nīrasakkareya savivuda kaṇḍe.
Kalluhōrinalli niśākaranudayavāgi
beḷudiṅgaḷadoḷage divākaranudayavāduda kaṇḍe.
Bisilu āvarisidalli ili sattu, mārjālaveddu,
kariyiruveya koḍahi,
nīrasakkareya caraṇadallodedu
kalluhōru karagi kasavaḷidalli
bayalabombeya saṅgavamāḍi
nirvayalarūpu sutana haḍeduda nōḍi
ratitrayavēdi kucagaḷanotti nereyalāgi
satipati tōralollade strīyaḷidu puruṣanāgi sattalli
guruniran̄jana cannabasavaliṅga tāne.