Index   ವಚನ - 801    Search  
 
ಕಾಯಭಾವ ಕಾಯದಲ್ಲಿಯೇ ಬೆಳೆದು ಕಾಯದಲ್ಲಿಯೇ ಅಡಗಿ, ಮನಭಾವ ಮನದಲ್ಲಿಯೇ ಬೆಳೆದು ಮನದಲ್ಲಿಯೇ ಅಡಗಿ, ಪ್ರಾಣನಭಾವ ಪ್ರಾಣದಲ್ಲಿಯೇ ಬೆಳೆದು ಪ್ರಾಣದಲ್ಲಿಯೇ ಅಡಗಿ, ಅತ್ತಿತ್ತಲರಿಯದೆ ಸತ್ತುಹೋಗುವ ಮಿಥ್ಯಮಾನವರು ಕಾಯವಕಳೆದು ಕಾಣಿಸಿ ಅಡಗಿ, ಮನವಕಳೆದು ಕಾಣಿಸಿ ಅಡಗಿ, ಪ್ರಾಣವಕಳೆದು ಕಾಣಿಸಿ ಅಡಗಿ, ಅತ್ತಿತ್ತರಿಯದೆ ಅಡಗಿ ಹೋಗುವ ಅಖಂಡೈಕ್ಯವನಿವರೆತ್ತ ಬಲ್ಲರು? ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿ.