ಬೇರಿಲ್ಲದ ಲಿಂಗವ ಬೇರೆಮಾಡಿ ಪೂಜಿಸುವ
ತನುಸಂಬಂಧಿಗಳನೇನೆಂಬೆನಯ್ಯಾ!
ತನುಸಂಬಂಧವಾದಲ್ಲಿ ಮನವುಲಿವುದು,
ಭಾವ ಬೆರೆಸುವದು, ಬೆಸಿಗೆ ಬಿಚ್ಚುವದು,
ಗುರುನಿರಂಜನ ಚನ್ನಬಸವಲಿಂಗ ವೇಧಿಸದೆ
ಭಕ್ತಿ ಇತ್ತರವಾಗಿಪ್ಪುದು.
Art
Manuscript
Music
Courtesy:
Transliteration
Bērillada liṅgava bēremāḍi pūjisuva
tanusambandhigaḷanēnembenayyā!
Tanusambandhavādalli manavulivudu,
bhāva beresuvadu, besige biccuvadu,
guruniran̄jana cannabasavaliṅga vēdhisade
bhakti ittaravāgippudu.