Index   ವಚನ - 865    Search  
 
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ಬಿಂದುವಿನ ಸುಳುಹಿಲ್ಲ ಕಾಣಾ. ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ನಾದದ ಸುಳುಹಿಲ್ಲ ಕಾಣಾ. ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ಕಳೆಯ ಸುಳುಹಿಲ್ಲ ಕಾಣಾ. ಅದೇನು ಕಾರಣವೆಂದಡೆ, ನಾದ ಬಿಂದು ಕಳೆ ಶಿವಕಳೆಯೊಳು ಬೆರೆದಿರ್ದವಾಗಿ. ಎನ್ನ ನಡೆ ನುಡಿ ನಿಮ್ಮೊಳಗೆ ಅಡಗಿರ್ದವು ಕಾಣಾ ಗುರುನಿರಂಜನ ಚನ್ನ ಬಸವಲಿಂಗಾ.