Index   ವಚನ - 866    Search  
 
ಮಹಾಘನ ಪರಮಜ್ಯೋತಿರ್ಲಿಂಗವೆನ್ನಲ್ಲಿಗೆ ಬಂದು ಬಂದುದ ಬೇರ್ಪಡಿಸಿದೆ ನೋಡಾ! ಬಂದು ಚಿಂತೆಯಕೆಡಿಸಿ ನಿಶ್ಚಿಂತನ ಮಾಡಿದೆ ನೋಡಾ! ಬಂದು ನಿಂದು ಎನ್ನ ಒಳಹೊರಗೆ ತಾನೆಯಾಗಿ ಸಂದು ಭೇದವಿಲ್ಲದ ಗತಿಮತಿಯೊಳೊಪ್ಪಿ ಅತಿಶಯದ ಭೋಗಸಮರಸದೊಳಿರ್ದಿತು ನೋಡಾ. ಮತ್ತೆ ನಾನೆಂದರೆ ನಾಚಿಕೊಂಡಿತ್ತೆನ್ನ ಲಿಂಗಕಾಯ, ಅಭಿಮಾನಿಸಿಕೊಂಡಿತ್ತೆನ್ನ ಲಿಂಗಮನ, ಅಚಲಾನಂದಸುಖಿಯಾಗಿತ್ತೆನ್ನ ಲಿಂಗಭಾವ. ಈ ತ್ರಿವಿಧವೊಂದಾಗಿ ಗುರುನಿರಂಜನ ಚನ್ನಬಸವಲಿಂಗಾ ನಾ ನಿನ್ನನರಿಯದಿರ್ದೆ ಭಕ್ತನಾಗಿ ನಿಮ್ಮೊಳಗೆ.