ಮಹಾಘನ ಪರಮಜ್ಯೋತಿರ್ಲಿಂಗವೆನ್ನಲ್ಲಿಗೆ ಬಂದು
ಬಂದುದ ಬೇರ್ಪಡಿಸಿದೆ ನೋಡಾ!
ಬಂದು ಚಿಂತೆಯಕೆಡಿಸಿ ನಿಶ್ಚಿಂತನ ಮಾಡಿದೆ ನೋಡಾ!
ಬಂದು ನಿಂದು ಎನ್ನ ಒಳಹೊರಗೆ ತಾನೆಯಾಗಿ
ಸಂದು ಭೇದವಿಲ್ಲದ ಗತಿಮತಿಯೊಳೊಪ್ಪಿ
ಅತಿಶಯದ ಭೋಗಸಮರಸದೊಳಿರ್ದಿತು ನೋಡಾ.
ಮತ್ತೆ ನಾನೆಂದರೆ ನಾಚಿಕೊಂಡಿತ್ತೆನ್ನ ಲಿಂಗಕಾಯ,
ಅಭಿಮಾನಿಸಿಕೊಂಡಿತ್ತೆನ್ನ ಲಿಂಗಮನ,
ಅಚಲಾನಂದಸುಖಿಯಾಗಿತ್ತೆನ್ನ ಲಿಂಗಭಾವ.
ಈ ತ್ರಿವಿಧವೊಂದಾಗಿ ಗುರುನಿರಂಜನ ಚನ್ನಬಸವಲಿಂಗಾ
ನಾ ನಿನ್ನನರಿಯದಿರ್ದೆ ಭಕ್ತನಾಗಿ ನಿಮ್ಮೊಳಗೆ.
Art
Manuscript
Music
Courtesy:
Transliteration
Mahāghana paramajyōtirliṅgavennallige bandu
banduda bērpaḍiside nōḍā!
Bandu cinteyakeḍisi niścintana māḍide nōḍā!
Bandu nindu enna oḷahorage tāneyāgi
sandu bhēdavillada gatimatiyoḷoppi
atiśayada bhōgasamarasadoḷirditu nōḍā.
Matte nānendare nācikoṇḍittenna liṅgakāya,
abhimānisikoṇḍittenna liṅgamana,
acalānandasukhiyāgittenna liṅgabhāva.
Ī trividhavondāgi guruniran̄jana cannabasavaliṅgā
nā ninnanariyadirde bhaktanāgi nim'moḷage.