Index   ವಚನ - 867    Search  
 
ಅಯ್ಯಾ, ನಿಮ್ಮ ಶರಣರ ವೇಷವ ಹೊತ್ತು ನಡೆವರಯ್ಯಾ ಈ ಧರೆಯೊಳಗೆ, ನಾವು ನಿಜೈಕ್ಯರೆಂದು ನುಡಿದುಕೊಂಬುವರಯ್ಯಾ ವಾಕ್ಪಟುತ್ವವನೆತ್ತಿ. ಅಗಮ್ಯಜ್ಞಾನಿಗಳೆಂದು ಮೌನಗೊಂಡಿಪ್ಪರಯ್ಯಾ ಮಲತ್ರಯದಲ್ಲಿ ಮನವ ಹುದುಗಿಸಿ. ಇಂತೀ ಗುಪ್ತಪಾತಕ ಅಜ್ಞಾನಿಗಳಿಗೆ ಕುಂಭಿನಿ ನಾಯಕನರಕ ತಪ್ಪದು ಕಾಣಾ, ಗುರುನಿರಂಜನ ಚನ್ನಬಸವಲಿಂಗಾ.