ಅಯ್ಯಾ, ನಿಮ್ಮ ಶರಣರ ವೇಷವ ಹೊತ್ತು
ನಡೆವರಯ್ಯಾ ಈ ಧರೆಯೊಳಗೆ,
ನಾವು ನಿಜೈಕ್ಯರೆಂದು ನುಡಿದುಕೊಂಬುವರಯ್ಯಾ ವಾಕ್ಪಟುತ್ವವನೆತ್ತಿ.
ಅಗಮ್ಯಜ್ಞಾನಿಗಳೆಂದು ಮೌನಗೊಂಡಿಪ್ಪರಯ್ಯಾ
ಮಲತ್ರಯದಲ್ಲಿ ಮನವ ಹುದುಗಿಸಿ.
ಇಂತೀ ಗುಪ್ತಪಾತಕ ಅಜ್ಞಾನಿಗಳಿಗೆ ಕುಂಭಿನಿ
ನಾಯಕನರಕ ತಪ್ಪದು ಕಾಣಾ,
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ayyā, nim'ma śaraṇara vēṣava hottu
naḍevarayyā ī dhareyoḷage,
nāvu nijaikyarendu nuḍidukombuvarayyā vākpaṭutvavanetti.
Agamyajñānigaḷendu maunagoṇḍipparayyā
malatrayadalli manava hudugisi.
Intī guptapātaka ajñānigaḷige kumbhini
nāyakanaraka tappadu kāṇā,
guruniran̄jana cannabasavaliṅgā.
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ