ಕಾಯಕರ್ಮಕೂಟಿಗಳಿಗೆ
ಕರ್ತುಗಳರಿವ ನಿಷ್ಠೆಯ ನಿರ್ಮಲಸುಖವೆಲ್ಲಿಹದೊ?
ಮನದ ಮಾಯಾಕೂಟಿಗಳಿಗೆ
ಮನದೊಡೆಯರನರಿವ ನಿಷ್ಠೆಯ ನಿಲುವಿನ ಸೊಬಗೆಲ್ಲಿಹದೊ?
ಪ್ರಾಣನ ಸಂಚಲಸಂಯೋಗಿಗಳಿಗೆ
ಪ್ರಾಣಲಿಂಗಸಂಬಂಧವನರಿವ ನಿಷ್ಠೆಯ ನಿಜಸುಖವೆಲ್ಲಿಹದೊ?
ಭಾವದ ಭ್ರಾಂತಿಯೊಳ್ಮುಳುಗಿರ್ದ ತಾಮಸಪ್ರಾಣಿಗಳಿಗೆ
ಗುರುನಿರಂಜನ ಚನ್ನಬಸವಲಿಂಗ ನಿಜೈಕ್ಯದ
ನಿಸ್ಸೀಮ ಸುಖವೆಲ್ಲಿಹದೊ?
Art
Manuscript
Music
Courtesy:
Transliteration
Kāyakarmakūṭigaḷige
kartugaḷariva niṣṭheya nirmalasukhavellihado?
Manada māyākūṭigaḷige
manadoḍeyaranariva niṣṭheya niluvina sobagellihado?
Prāṇana san̄calasanyōgigaḷige
prāṇaliṅgasambandhavanariva niṣṭheya nijasukhavellihado?
Bhāvada bhrāntiyoḷmuḷugirda tāmasaprāṇigaḷige
guruniran̄jana cannabasavaliṅga nijaikyada
nis'sīma sukhavellihado?
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ