Index   ವಚನ - 870    Search  
 
ಪರಧನಕ್ಕೆ ಹರಿವ ಮನವಿರ್ದಂತೆ ಜಂಗಮಲಿಂಗೈಕ್ಯವೆಂಬ ನುಡಿ ನಿನಗಿಂಪು ತೋರುವುದೆ? ಪರಸ್ತ್ರೀಯರಿಗೆ ಹರಿವ ಮನವಿರ್ದಂತೆ ಲಿಂಗಜಂಗಮೈಕ್ಯವೆಂಬ ನುಡಿ ನಿನಗೆ ಸಂಪು ತೋರುವುದೆ? ಪರದೈವಕ್ಕೆ ಹರಿವ ಮನವಿರ್ದಂತೆ ಗುರುಲಿಂಗೈಕ್ಯವೆಂಬ ನುಡಿ ನಿನಗೆ ತಂಪು ತೋರುವುದೆ? ಇದುಕಾರಣ, ಗುರುನಿರಂಜನ ಚನ್ನಬಸವಲಿಂಗಾ ನಿನಗೆ ಇಂಪು ಸಂಪು ತಂಪು ತೋರದ ನಡೆನುಡಿ ಕೂಟವೆಲ್ಲ ನಿರಿಯಕೂಟ ನಿಜವಾಯಿತ್ತು ಕಾಣಾ.