Index   ವಚನ - 908    Search  
 
ಕಾಲಿಲ್ಲದ ಗಮನದವರು ನಡೆಯಲನುವಿಲ್ಲ. ಕಣ್ಣಿಲ್ಲದ ನೋಟದವರು ನೋಡಲನುವಿಲ್ಲ. ಕೈಯಿಲ್ಲದ ಮುಟ್ಟುವರು ಮುಟ್ಟಲನುವಿಲ್ಲ. ಬಾಯಿಲ್ಲದ ನುಡಿವರು ನುಡಿಯಲನುವಿಲ್ಲ. ಕಿವಿಯಿಲ್ಲದ ಕೇಳುವರು ಕೇಳಲನುವಿಲ್ಲ. ಗುರುನಿರಂಜನ ಚೆನ್ನಬಸವಲಿಂಗದಲ್ಲಿ ಐಕ್ಯವನರಿಯದವರು ಐಕ್ಯವಾಗಲನುವಿಲ್ಲ.